ಮುಚ್ಚಿ

ವಿರೂಪಾಕ್ಷಿ ದೇವಾಲಯ ಮುಳಬಾಗಿಲು

ವರ್ಗ ಇತರೆ

ವಿರೂಪಾಕ್ಷಿ ದೇವಾಲಯ ಮುಳಬಾಗಿಲು

ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ವಿರೂಪಾಕ್ಷ ಗ್ರಾಮದಲ್ಲಿರುವ ಈ ದೇವಾಲಯವು ಬೆಂಗಳೂರಿನಿಂದ 100 ಕಿ.ಮೀ ಹಾಗೂ ಮುಳಬಾಗಿಲಿನಿಂದ 5 ಕಿ.ಮೀ ದೂರದಲ್ಲಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಎರಡು ಲಿಂಗಗಳಿವೆ. ಒಂದನ್ನು ವಿರೂಪಾಕ್ಷೇಶ್ವರ ಆತ್ಮಲಿಂಗವೆಂದು ಇನ್ನೊಂದನ್ನು ಮಾರ್ಗದರ್ಶೇಶ್ವರ ಶಿವಲಿಂಗ ಎಂದು ಕರೆದು ಪೂಜಿಸಲಾಗುತ್ತದೆ. ಗರ್ಭಗುಡಿಯಲ್ಲಿ ಎರಡೆರಡು ಆತ್ಮಲಿಂಗವಿರುವ ಭಾರತದ ಎರಡು ದೇವಾಲಯಗಳಲ್ಲಿ ಮೊದಲನೇಯದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರ ಹಾಗೂ ಎರಡನೇಯದು ಮುಳುಬಾಗಲು ತಾಲ್ಲೂಕಿನ ವಿರೂಪಾಕ್ಷ ದೇವಾಲಯವಾಗಿದೆ. ಸ್ಥಳ ಪುರಾಣದ ಪ್ರಕಾರ ಹಿಂದೆ ಅತ್ರಿ ಮಹರ್ಷಿಗಳು ಮುಳುಬಾಗಿಲಿನಲ್ಲಿ ಮಾರ್ಗದರ್ಶೇಶ್ವರ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು. ನಂತರದಲ್ಲಿ ಅವರ ಅನನ್ಯ ಭಕ್ತಿಗೆ ಮೆಚ್ಚಿ ಶಿವಪರಮಾತ್ಮನು ಆತ್ಮಲಿಂಗವನ್ನು ಅತ್ರಿ ಮಹರ್ಷಿಗಳಿಗೆ ನೀಡಿದ್ದಾರೆ. ಆಗ ಅತ್ರಿ ಮಹರ್ಷಿಗಳು ಆತ್ಮಲಿಂಗವನ್ನು ಮಾರ್ಗದರ್ಶೇಶ್ವರ ಶಿವಲಿಂಗದ ಮುಂಭಾಗದಲ್ಲೇ ಪ್ರತಿಷ್ಠಾಪಿಸಿ, ಪೂಜೆ ಮಾಡುತ್ತಾ ಬಂದಿದ್ದಾರೆ. ಶಿವ ಪರಮಾತ್ಮ ನೀಡಿದ ಆತ್ಮಲಿಂಗ ವಿಶೇಷವಾಗಿದ್ದು, ಒಂದು ದಿನಕ್ಕೆ ಮೂರು ಸಲ ಬಣ್ಣವನ್ನು ಬದಲಾಯಿಸುತ್ತದೆ. ಬೆಳಗಿನ ವೇಳೆ – ಕೆಂಪುಬಣ್ಣ, ಮಧ್ಯಾಹ್ನ ವೇಳೆ ಬಿಳಿಬಣ್ಣ ಹಾಗೂ ಸಂಜೆಯ ವೇಳೆ – ಜೇನುತುಪ್ಪದ ಬಣ್ಣದಿಂದ ಶೋಭಿಸುತ್ತದೆ. ಕರ್ನಾಟಕದಲ್ಲಿ ಬಣ್ಣ ಬದಲಾಯಿಸುವ ಶಿವಲಿಂಗವಿರುವ ಎರಡು ದೇವಾಲಯಗಳಿವೆ. ಮೊದಲನೇಯದು ದಕ್ಷಿಣ ಕನ್ನಡ ಜಿಲ್ಲೆಯ ಕಾಂತಾರದ ಕಾಂತೇಶ್ವರ ದೇವಾಲಯ ಹಾಗೂ ಎರಡನೇಯದು ಮುಳಬಾಗಿಲಿನ ಈ ವಿರೂಪಾಕ್ಷ ದೇಗುಲವಾಗಿದೆ. ಈ ದೇವಾಲಯದ ಇನ್ನೊಂದು ವಿಶೇಷವೆಂದರೆ ಅತ್ಮಲಿಂಗದಿಂದ ವಿಕಿರಣಗಳು
ಹೊರಸೂಸುತ್ತಿರುತ್ತವೆ. ವಿಕಿರಣಗಳು ದಿನದ ಬೇರೆ ಬೇರೆ ಸಮಯಕ್ಕೆ ಅನುಗುಣವಾಗಿ ತೀವೃತೆಯನ್ನು ಹೊಂದಿರುತ್ತದೆ. ಈ ವಿಕಿರಣಗಳು ನಕಾರಾತ್ಮಕ ಶಕ್ತಿಯನ್ನು ಹೊಡೆದು ಹಾಕಿ ಸಕಾರಾತ್ಮಕ ಬಲವನ್ನು ವೃದ್ಧಿಗೊಳಿಸುತ್ತವೆ. ದೇವಾಲಯದ ಮುಂಭಾಗದಲ್ಲಿ ಒಂದು ಸ್ಥಳವಿದ್ದು, ಆ ಸ್ಥಳದಲ್ಲಿ ದ್ಯಾನಾಸಕ್ತರಾದವರಿಗೆ ವಿಕಿರಣಗಳ ಕಂಪನಗಳು ಅನುಭವಕ್ಕೆ ಬರುತ್ತದೆ. ಈ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಾಲಯವನ್ನು ವಿಜಯನಗರ ಅರಸರ ದಂಡನಾಯಕನಾಗಿದ್ದ, ಲಕ್ಷ್ಮಣ ಹಾಗೂ ಮೂಡಣ ದಂಡೇಶ ಎಂಬವರು ನಿರ್ಮಿಸಿದ್ದಾರೆ. ವಿಶಾಲವಾದ ಪ್ರಾಕಾರ ಹೊಂದಿರುವ ಈ ದೇವಾಲಯವು ರಾಜ್ಯ ಪುರಾತತ್ವ ಇಲಾಖೆಗೆ ಒಳಪಟ್ಟದ್ದು ಒಳಾಂಗಣದಲ್ಲಿ ಒಂದು ಹಾಗೂ ಹೊರಾಂಗಣದಲ್ಲಿ ಒಂದು ಒಟ್ಟು ಎರಡು ಸುಂದರ ಕಲ್ಯಾಣಿಯನ್ನು ಹೊಂದಿದೆ.

ಹತ್ತಿರದ ಪ್ರವಾಸಿ ಸ್ಥಳಗಳು.
1. ಕೋಟಿಲಿಂಗೇಶ್ವರ ದೇವಾಲಯ : ವಿರೂಪಾಕ್ಷ ದೇವಾಲಯದಿಂದ 20 ಕಿ.ಮೀ. ದೂರದಲ್ಲಿರುವ ಕೋಟಿಲಿಂಗೇಶ್ವರ ಸಹಸ್ರಾರು ಸಂಖ್ಯೆಯ ಲಿಂಗಗಳನ್ನು ಹೊಂದಿದ್ದು ಅತೀ ದೋಡ್ಡ ಅಳತೆಯ ಒಂದು ಲಿಂಗವಿರುತ್ತದೆ.
2. ಆವನಿ ಬೆಟ್ಟ; ವಿರೂಪಾಕ್ಷ ದೇವಾಲಯದಿಂದ 07 ಕಿ.ಮೀ. ದೂರದಲ್ಲಿರುವ ಆವನಿ ಬೆಟ್ಟವು ಪ್ರಸಿದ್ದ ಟ್ರೆಕ್ಕಿಂಗ ಸ್ಥಳವಾಗಿದೆ. ಇಲ್ಲಿ ಪುರಾತನವಾದ ರಾಮಲಿಂಗೇಶ್ವರ ದೇವಾಲಯ ಮನೋಹರವಾಗಿದೆ.
3. ಕುರುಡುಮಲೆ ಗಣೇಶ ದೇವಾಲಯ: ವಿರೂಪಾಕ್ಷ ದೇವಾಲಯದಿಂದ 12 ಕಿ.ಮೀ. ದೂರದಲ್ಲಿರುವ ಈ ದೇವಾಲಯದಲ್ಲಿ ಸಾಲಿಗ್ರಾಮ ಶಿಲೆಯಿಂದ ಸುಂದರವಾಗಿ ನಿರ್ಮಿತವಾದ ಗಣೇಶನ ಸುಂದರ ದೇವಾಲಯವಿದೆ.
4. ಅಂತರಗಂಗೆ ಬೆಟ್ಟ: ವಿರೂಪಾಕ್ಷ ದೇವಾಲಯದಿಂದ 30 ಕಿ.ಮೀ. ದೂರದಲ್ಲಿರುವ ಅಂತರಗಂಗೆ ಬೆಟ್ಟ ಕೋಲಾರದ ಪ್ರಸಿದ್ದ ಧಾರ್ಮಿಕ ಹಾಗೂ ಟ್ರಕ್ಕಿಂಗ್‌ ಸ್ಥಳವಾಗಿದೆ.

ಹತ್ತಿರದ ವಸತಿ ವ್ಯವಸ್ಥೆಗಳ ವಿವರ
1. ಹೋಟೆಲ್‌ ಬಾಲಾಜಿ ಭವನ್‌, ಬೈಪಾಸ್‌ ರಸ್ತೆ ಮುಳಬಾಗಿಲು
ಪೋನ್‌ ನಂ-7795388673 (ಗೋಪಿನಾಥ್)
2. ವಿ,ವಿ,ಆರ್‌ ಆನಂದ್‌ ಭವನ್‌ ಬೈಪಾಸ್‌ ರಸ್ತೆ, ಭೈಪಲ್ಲಿ ಮಾರ್ಗ
ಪೋನ್‌ ನಂ- 9986632304‌ (ನಿತಿನ್)‌

ಫೋಟೋ ಗ್ಯಾಲರಿ

  • ಕೋಟಿಲಿಂಗೇಶ್ವರ ದೇವಸ್ಥಾನ

ತಲುಪುವ ಬಗೆ:

ವಿಮಾನದಲ್ಲಿ

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 100 ಕಿಮೀ ದೂರದಲ್ಲಿರುವ ಹತ್ತಿರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

ರೈಲಿನಿಂದ

ಬಂಗಾರಪೇಟೆ ವಿರೂಪಾಕ್ಷಿ ದೇವಸ್ಥಾನದಿಂದ ಹತ್ತಿರದ ರೈಲು ನಿಲ್ದಾಣವಾಗಿದೆ ಮತ್ತು ಇದು 45 ಕಿಮೀ ದೂರದಲ್ಲಿದೆ.

ರಸ್ತೆ ಮೂಲಕ

ಮುಳಬಾಗಿಲು ವಿರೂಪಾಕ್ಷಿ ದೇವಸ್ಥಾನದಿಂದ ಹತ್ತಿರದ ಬಸ್ ನಿಲ್ದಾಣವಾಗಿದೆ ಮತ್ತು ಇದು ಸುಮಾರು 4 ಕಿಮೀ ದೂರದಲ್ಲಿದೆ.