ಮುಚ್ಚಿ

ಆಡಳಿತಾತ್ಮಕ ವ್ಯವಸ್ಥೆ

ಜಿಲ್ಲಾಧಿಕಾರಿಯು ಜಿಲ್ಲೆಯ ಆಡಳಿತದ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾಧಿಕಾರಿಗಳ ಕಚೇರಿಯು ವಿವಿಧ ಶಾಖೆಗಳನ್ನು ಒಳಗೊಂಡಿದ್ದು ಶಾಖೆಗಳ ಕೆಲಸದ ಮೇಲ್ವಿಚಾರಣೆಯನ್ನು ಶಿರಸ್ತೆದಾರು ವಹಿಸಿಕೊಂಡು ಮಾರ್ಗದರ್ಶನ ಮತ್ತು ಸಮಗ್ರ ನಿರ್ವಹಣೆಗೆ ಜವಾಬ್ದಾರರು. ಪ್ರತಿ ಶಾಖೆಗೆ ಮೊದಲ ದರ್ಜೆಯ ಸಹಾಯಕರು ಅಥವಾ ಎರಡನೇ ದರ್ಜೆಯ ಸಹಾಯಕರು ವಿಷಯ ನಿರ್ವಾಹಕರಾಗಿ ವಹಿಸಿದ ಸಂಕಲನಗಳನ್ನು ನಿರ್ವಹಿಸುತ್ತಾರೆ. ಜಿಲ್ಲಾಧಿಕಾರಿಗಳ ಅದೀನದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಾಗಿ ಉಪ ವಿಭಾಗಕ್ಕೆ ಸಹಾಯಕ ಆಯುಕ್ತರು, ತಾಲ್ಲೂಕುಗಳಿಗೆ ತಹಶೀಲ್ದಾರರು, ಶೀರಸ್ತೆದಾರ್, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ಕಾರ್ಯನಿರ್ವಹಿಸುತ್ತಾರೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೋರ್ಟ್ ಪ್ರಕರಣಗಳು ಅಂದರೆ ಕಂದಾಯ ಅಪೀಲ್ಸ್ ಗೆ ಸಂಭಂಧಪಟ್ಟ, ಕಂದಾಯ ವಿವಿಧ (ಕೆಎಲ್ಆರ್ ಆಕ್ಟ್, 1964), ಕೆಲವು ಲ್ಯಾಂಡ್ಸ್ (ಪಿಟಿಸಿಎಲ್ ಆಕ್ಟ್, 1978) ಮತ್ತು ಇನಾಮ್ (ಇನಾಮ್ ಅಬಾಲಿಷನ್ ಆಕ್ಟ್) ವರ್ಗಾವಣೆ ನಿಷೇಧ ಸಂಬಂಧಿಸಿದ ಪ್ರಕರಣಗಳು ವ್ಯವಹರಿಸುತ್ತಾರೆ. ಹಾಗೂ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಸಲಹೆ ನಿಡಲು ಒಬ್ಬ ಕಾನೂನು ಸಲಹೆಗಾರರು ಇರುತ್ತಾರೆ