ಕೋಟಿಲಿಂಗೇಶ್ವರ ದೇವಸ್ಥಾನ
ಕೋಲಾರ ಜಿಲ್ಲೆ ಯ ಬಂಗಾರಪೇಟೆ ಗೆ ೧೨ ಕಿಲೋ ಮೀಟರ್ ದೂರದಲ್ಲಿರುವ ಕಮ್ಮಸಂದ್ರ ಇಂದು ಪವಿತ್ರ ಪುಣ್ಯಕ್ಷೇತ್ರವಾಗಿ ಕೋಟಿಲಿಂಗಗಳ ನಾಡಾಗಿದೆ.
೧೦೮ ಅಡಿಗಳ ಬೃಹತ್ ಶಿವಲಿಂಗ ಹಾಗೂ ೩೨ ಅಡಿ ಎತ್ತರದ ಅತಿ ದೊಡ್ಡ ಬಸವಣ್ಣನನನ್ನು ಹೊಂದಿದ ಇಲ್ಲಿ ಭಕ್ತರು ನಿತ್ಯವೂ ಶಿವಲಿಂಗ ಸ್ಥಾಪನೆ ಮಾಡುತ್ತಿದ್ದು, ಈ ಕ್ಷೇತ್ರದಲ್ಲಿ ಮುಂದಿನ ಕೆಲವು ದಶಕಗಳಲ್ಲಿ ಕೋಟಿ ಲಿಂಗ ಸ್ಥಾಪನೆಯಾಗುವ ಸಾಧ್ಯತೆ ಇದೆ. ತ್ರೇತಾಯುಗದ ಕಾಲದಿಂದಲೂ ಪವಿತ್ರ ಕ್ಷೇತ್ರವೆಂದೇ ಪರಿಗಣಿತವಾಗಿರುವ ಕಮ್ಮಸಂದ್ರದಲ್ಲಿ ಶ್ರೀಸಾಂಬಶಿವಮೂರ್ತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಕ್ಷೇತ್ರದಲ್ಲಿರುವ ವಿಶಾಲ ಪ್ರಕಾರದ ಮೊದಲ ಮುಖ್ಯದ್ವಾರದಲ್ಲಿ ಶಿವಲಿಂಗ ಮತ್ತು ಬಸವೇಶ್ವರರ ದರ್ಶನ ಪಡೆದು, ಎರಡನೇ ದ್ವಾರಕ್ಕೆ ಬಂದರೆ ಆಕಾಶ ಶಿವಲಿಂಗ ಮತ್ತು ಅನೇಕ ದೇವತೆಗಳ ದರ್ಶನವಾಗುತ್ತದೆ. ಮುಂದೆ ಸಾಗುತ್ತಿದ್ದಂತೆ ವಿಶಾಲ ಪ್ರಕಾರದಲ್ಲಿ ಭಕ್ತರು ಸ್ಥಾಪಿಸಿರುವ ಸಾವಿರಾರು ಶಿವಲಿಂಗಗಳನ್ನು ನೋಡಬಹುದು.
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಬೆಂಗಳೂರಿನ ಕೆಂಪೇಗೌಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ಅಂತರರಾಷ್ಟ್ರೀಯ ವಿಮಾನನಿಲ್ದಾಣವಾಗಿದ್ದು ಇದು ಸುಮಾರು 100 ಕಿ.ಮೀ ದೂರದಲ್ಲಿದೆ.
ರೈಲಿನಿಂದ
ಕೋರಮಂಡಲ್ ಸಮೀಪದ ರೈಲ್ವೆ ನಿಲ್ದಾಣವಾಗಿದೆ ಹಾಗೂ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಇದು ಸುಮಾರು 8 ಕಿಮೀ ದೂರದಲ್ಲಿದೆ.
ರಸ್ತೆ ಮೂಲಕ
ಕಮ್ಮಸಂದ್ರ ಗ್ರಾಮ ಪಂಚಾಯತ್ ಬಸ್ ನಿಲ್ದಾಣ ಕೋಟಿಂಗೇಶ್ವರ ದೇವಸ್ಥಾನದಿಂದ ಸುಮಾರು 0.5 ಕಿ.ಮೀ ದೂರದಲ್ಲಿದೆ