ಮುಚ್ಚಿ

ಆರೋಗ್ಯ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯು ಸಾರ್ವಜನಿಕ ಆರೋಗ್ಯದ ಪ್ರಾಮುಖ್ಯತೆಯುಳ್ಳ ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ರಾಜ್ಯದ ಜನತೆಗೆ ವಿವಿಧ ರೀತಿಯ ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆಗಳ ಮೂಲಕ ಸಮರ್ಪಕ ಆರೋಗ್ಯ ರಕ್ಷಣಾ ಸೇವೆಗಳನ್ನೂ ಸಹ ಕಲ್ಪಿಸುತ್ತದೆ.

ಆರೋಗ್ಯ ರಕ್ಷಣಾ ಸೇವೆಗಳನ್ನು ಈ ಮುಂದಿನ ಅನುಷ್ಠಾನಗೊಳಿಸುವ ಮೂಲಕ ಕಲ್ಪಿಸಲಾಗಿದೆ :

 • ರಾಷ್ಟ್ರೀಯ ‘ಏಡ್ಸ್’ ನಿಯಂತ್ರಣಾ ಕಾರ್ಯಕ್ರಮ.
 • ಸಂತಾನೋತ್ಪತ್ತಿಯ ಶಿಶು ಆರೋಗ್ಯ (ಆರ್.ಸಿ.ಎಚ್), ಕುಟುಂಬ ಕಲ್ಯಾಣ ಮತ್ತು ರೋಗನಿರೋಧ ಕಾರ್ಯಕ್ರಮ
 • ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ
 • ರಾಷ್ಟ್ರೀಯ ಕ್ಷಯ ನಿಯಂತ್ರಣಾ ಕಾರ್ಯಕ್ರಮ
 • ರಾಷ್ಟ್ರೀಯ ಕಾರ್ಯಕ್ರಮವಾದ ಅಂಧತೆ ನಿಯಂತ್ರಣ ಕಾರ್ಯಕ್ರಮ
 • ರಾಷ್ಟ್ರೀಯ ಸಾಂಕ್ರಾಮಿಕ ಖಾಯಿಲೆ ನಿಯಂತ್ರಣಾ ಕಾರ್ಯಕ್ರಮ
 • ರಾಷ್ಟ್ರೀಯ ಗಿನೀವರ್ಮ್ ನಿವಾರಣಾ ಕಾರ್ಯಕ್ರಮ
 • ಡಯೇರಿಯಾದ ರೋಗಗಳು, ಜಪಾನೀ ಎನ್ಸೆಫಾಲೈಟಿಸ್, ಇತ್ಯಾದಿ ಸಾಂಕ್ರಾಮಿಕ ರೋಗಗಳ ನಿವಾರಣೆ ಮತ್ತು ನಿಯಂತ್ರಣ
 • ಆರೋಗ್ಯ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮ
 • ಪೌಷ್ಟಿಕತೆ ಕಾರ್ಯಕ್ರಮ – ಪೌಷ್ಟಿಕತೆ ಶಿಕ್ಷಣ ಮತ್ತು ಪ್ರಾತ್ಯಕ್ಷಿಕೆ 
 • ರಾಷ್ಟ್ರೀಯ ಅಯೋಡಿನ್ ಕೊರತೆಯ ಅಸ್ವಸ್ಥ್ಯತೆ ಕಾರ್ಯಕ್ರಮ
 • ಪ್ರಯೋಗಾಲಯ ಸೇವೆಗಳು ಮತ್ತು ಲಸಿಕೆ ತಯಾರಿಕಾ ಘಟಕಗಳು
 • ​ ಶಿಕ್ಷಣ ಮತ್ತು ನೈಸರ್ಗಿಕ ನೈರ್ಮಲ್ಯ ಮತ್ತು ಗುಣಪಡಿಸುವ ಸೇವೆಗಳು 

ಜಿಲ್ಲಾ ಆಸ್ಪತ್ರೆಯೂ ಈ ಮುಂದಿನ ಸ್ಪೆಷಾಲಿಟಿಗಳನ್ನು ಹೊಂದಿದೆ:

ಔಷಧ, ಪ್ರಸೂತಿಶಾಸ್ತ್ರ ಮತ್ತು ಗರ್ಭಕೋಶಶಾಸ್ತ್ರ, ಮೂಳೆ, ಕಿವಿ, ಮೂಗು ಮತ್ತು ಗಂಟಲು, ವಿಕಿರಣಶಾಸ್ತ್ರ, ದಂತ, ರಕ್ತನಿಧಿ, ಶಸ್ತ್ರಚಿಕಿತ್ಸೆ, ನೇತ್ರಶಾಸ್ತ್ರ, ಮಕ್ಕಳತಜ್ಞತೆ, ಚರ್ಮ ಮತ್ತು ಲೈಂಗಿಕ ರವಾನೆಯ ರೋಗಗಳು, ಅರಿವಳಿಕೆ, ಮನೋವಿಜ್ಞಾನ, ರೋಗಪತ್ತೆಶಾಸ್ತ್ರ.​​